S.J.M Vidyapeetha (R)

Sri Jagadguru Murugharajendra Arts College for Women

B.D.Road,  Chitradurga-577501.  Karnataka  India
Phone: 00-91-(08194)-223054
E-mail:sjmwc.cta@gmail.com




  • photo_one
  • photo_two
  • photo_three
  • photo_six
  • photo_four
  • photo_four
  • photo_six

ನಮ್ಮ ಸಂಸ್ಥೆಯ ಬಗ್ಗೆ

            ಐತಿಹಾಸಿಕ ಚಿತ್ರದುರ್ಗದ ಎಸ್.ಜೆ.ಎಂ. ವಿದ್ಯಾಪೀಠವು ಜಿಲ್ಲೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಯಾವುದೇ ಮಹಿಳಾ ವಿದ್ಯಾಲಯಗಳು ಇಲ್ಲವೆಂಬುದನ್ನು ಮನಗಂಡು ವಿದ್ಯಾರ್ಥಿನಿಯರಿಗೆ ಪದವಿ ಮಟ್ಟದ ಉನ್ನತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಎಸ್.ಜೆ.ಎಂ. ಮಹಿಳಾ ಮಹಾವಿದ್ಯಾಲಯವನ್ನು 1982ರಲ್ಲಿ ಪ್ರಾರಂಭಿಸಿತು. ಆರಂಭದಲ್ಲಿ ನಮ್ಮ ಮಹಾವಿದ್ಯಾಲಯವು ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟು ನಂತರ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಾಗೂ ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿರುತ್ತದೆ.

           ಮಹಾವಿದ್ಯಾಲಯವು ಚಿತ್ರದುರ್ಗ ನಗರದ ಹೃದಯಭಾಗದಲ್ಲಿ ಸ್ಥಾಪಿತವಾಗಿದ್ದು ಸಾಕಷ್ಟು ಸಂಖ್ಯೆಯ ತರಗತಿ ಕೊಠಡಿಗಳು, ಇಂಟರ್ಯಾಕ್ಟಿವ್ ಸ್ಮಾರ್ಟ್‍ಬೋರ್ಡ್, ಎಲ್.ಸಿ.ಡಿ. ಪ್ರೊಜೆಕ್ಟರ್ ಹಾಗೂ ದೃಶ್ಯ ಶ್ರವಣ ಬೋಧನಾ ಸಾಧನಗಳನ್ನು ಹೊಂದಿರುತ್ತದೆ. ವಿದ್ಯಾರ್ಥಿನಿಯರ ಸುರಕ್ಷಾ ದೃಷ್ಟಿಯಿಂದ ಸಿ.ಸಿ.ಟಿ.ವಿ. ನಿಗಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಂಥಾಲಯ ಮತ್ತು ಮಾಹಿತಿಕೇಂದ್ರ, ವಸತಿನಿಲಯ ಸೌಲಭ್ಯ ಹಾಗೂ ಕ್ರೀಡಾ ಚಟುವಟಿಕೆಗಳಿಗಾಗಿ ವಿಶಾಲ ಕ್ರೀಡಾಂಗಣ ವ್ಯವಸ್ಥೆ ಹೊಂದಿರುತ್ತದೆ.
           ಮಹಾವಿದ್ಯಾಲಯವು ಅರ್ಹ, ಅನುಭವಿ ಮತ್ತು ಬದ್ಧತೆಯುಳ್ಳ ಬೋಧಕ ಬೋಧಕೇತರ ಸಿಬ್ಬಂದಿಯನ್ನು ಹೊಂದಿರುತ್ತದೆ.

    ಮಹಾವಿದ್ಯಾಲಯವು ಕಲಾ ಮತ್ತು ವಾಣಿಜ್ಯ ನಿಕಾಯಗಳನ್ನು ಹೊಂದಿದ್ದು ಕಲಾ ನಿಕಾಯದಲ್ಲಿ 5 ವಿವಿಧ ವಿಭಾಗಗಳ ಸಂಯೋಜನೆಗಳಿಂದ ಕೂಡಿದ ಸ್ನಾತಕ ಬಿ.ಎ. ಪದವಿ ಶಿಕ್ಷಣವಲ್ಲದೇ ಕೆಲವು ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಕೂಡ ನಡೆಸಲಾಗುತ್ತಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯು.ಜಿ.ಸಿ.) ಕಾಯ್ದೆಯ 2ಎಫ್ ಮತ್ತು 12ಬಿ ಅಡಿಯಲ್ಲಿ ಸೇರ್ಪಡೆಯಾಗಿದ್ದು ಅನುದಾನಕ್ಕೆ ಒಳಪಟ್ಟಿರುತ್ತದೆ.

     ಮಹಾವಿದ್ಯಾಲಯವು ವಾಣಿಜ್ಯ ನಿಕಾಯವನ್ನು(ಬಿ.ಕಾಂ.) ಹೊಂದಿದ್ದು ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು ಮತ್ತು ಸಂಸ್ಕøತ ಭಾಷೆಗಳ ಜೊತೆಗೆ ವಾಣಿಜ್ಯ ನಿಕಾಯಕ್ಕೆ ವಿಶ್ವವಿದ್ಯಾನಿಲಯ ನಿಗದಿಪಡಿಸಿದ ಕಡ್ಡಾಯ ವಿಷಯಗಳನ್ನು ಬೋಧಿಸಲಾಗುತ್ತದೆ.

     ಮಹಾವಿದ್ಯಾಲಯದ ಕಟ್ಟಡದ ಮೊದಲ ಮಹಡಿಯಲ್ಲಿ ಪ್ರಾಂಶುಪಾಲರು ಹಾಗೂ ಅವರ ಕಛೇರಿಯ ವಿವಿಧ ಶಾಖೆಗಳನ್ನು(ಲೆಕ್ಕಪತ್ರ, ಸಿಬ್ಬಂದಿ, ಪರೀಕ್ಷೆ, ವಿದ್ಯಾರ್ಥಿವೇತನ ಮತ್ತು ಇತರೆ) ವಿದ್ಯಾರ್ಥಿನಿಯರು ಸುಲಭವಾಗಿ ಸಂಪರ್ಕಿಸಬಹುದಾಗಿದೆ. 2ನೇ ಮಹಡಿಯಲ್ಲಿ ರಜತ ಸಭಾಂಗಣವಿದ್ದು ಅಲ್ಲಿ ಸಮ್ಮೇಳನ, ವಿಚಾರಸಂಕಿರಣ, ಕಾರ್ಯಗಾರ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಶೌಚಾಲಯವನ್ನೊಳಗೊಂಡ ಪ್ರತ್ಯೇಕ ಸಾಮಾನ್ಯ ಕೊಠಡಿಯನ್ನು ಒದಗಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಉಪಹಾರ ಗೃಹದಲ್ಲಿ ಶುದ್ಧ ಆಹಾರವನ್ನು ಒದಗಿಸಲಾಗಿದೆ ಹಾಗೂ ಆರ್.ಒ. ಮೂಲಕ ಶುದ್ಧೀಕರಿಸಿದ ನೀರಿನ ಸೌಲಭ್ಯ ಹೊಂದಿದ ಕೂಲರ್ ಅಳವಡಿಸಿ ಬಾಯಾರಿಕೆಯನ್ನು ತಣಿಸಲಾಗುತ್ತಿದೆ.
     ಮಹಾವಿದ್ಯಾಲಯವು ತನ್ನ ಯೋಜಿತ ಸ್ನಾತಕ ಪದವಿ ಕೋರ್ಸುಗಳ ಮೂಲಕ ಸಮಗ್ರ ಹಾಗೂ ವ್ಯಕ್ತಿಗತ ಶಿಕ್ಷಣವನ್ನು ವಿದ್ಯಾರ್ಥಿನಿಯರಿಗೆ ನೀಡುವುದನ್ನು ಗುರಿಯಾಗಿಸಿಕೊಂಡಿದೆ. ಬೌದ್ಧಿಕವಾಗಿ ಸ್ಪರ್ಧೆ ನೀಡಬಲ್ಲ, ನೀತಿಯುತವಾಗಿ ನೇರ ಹಾಗೂ ಪ್ರಬಲ, ಬದ್ಧತೆಯುಳ್ಳ, ಆಧ್ಯಾತ್ಮಿಕ ಸ್ಫೂರ್ತಿ ಹೊಂದಿದ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳುವ ವಿದ್ಯಾರ್ಥಿನಿಯರನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
     ಮಹಾವಿದ್ಯಾಲಯದ ಧ್ಯೇಯ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಶ್ರಮಿಸುತ್ತಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಬಗ್ಗೆ ಆದ್ಯತೆ ಸೇರಿದಂತೆ ಎಲ್ಲರ ನಂಬಿಕೆಗಳನ್ನು ಗೌರವಿಸುವ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಹೆಚ್ಚಿಸುವ, ರಾಷ್ಟ್ರೀಯ ಸಮಗ್ರತಾ ಮನೋಭಾವ ಬೆಳೆಸಿಕೊಳ್ಳಲು ಅಗತ್ಯವಾದ ಬೋಧನೆ ಮತ್ತು ಕಲಿಕಾ ವಾತಾವರಣ ರೂಪಿಸಲಾಗಿದೆ.
     ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಭವಿಷ್ಯ ಹಾಗೂ ಅವರ ಸುರಕ್ಷತೆಯ ಸಲುವಾಗಿ ಮಹಾವಿದ್ಯಾಲಯದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಶಿಸ್ತು, ಸಾಂಸ್ಕøತಿಕ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ, ಮಹಿಳಾ ದೂರು/ಕಿರುಕುಳ ನಿವಾರಣಾ ಸಮಿತಿ, ರ್ಯಾಗಿಂಗ್ ತಡೆ, ಮಹಿಳಾ ಸಬಲೀಕರಣ, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ, ಆಪ್ತಸಮಾಲೋಚನೆ, ಪ.ಜಾ/ಪ.ವ. ಕಲ್ಯಾಣ ಸಮಿತಿಗಳು ಆಂತರಿಕ ಗುಣಮಟ್ಟ ಭರವಸೆಯ ಕೋಶದ (ಐಕ್ಯೂಎಸಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.